
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋದೂರದೊಂದು ತೀರದಿಂದತೇಲಿ ಪಾರಿಜಾತ ಗಂಧ೨ದಾಟಿ ಬಂತು ಬೇಲಿ ಸಾಲಮೀಟಿ ಹಳೆಯ ಮಧುರ ನೋವಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಬಾನಿನಲ್ಲಿ ಒಂಟಿ ತಾರೆಸೋನೆ ಸುರಿವ ಇರುಳ ಮೋರೆ೨ಕತ್ತಲಲ್ಲಿ ಕುಳಿತು ಒಳಗೆಬಿಕ್ಕುತಿಹಳು ಯಾರೋ ನೀರೆಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಹಿಂದೆ ಯಾವ ಜನ್ಮದಲ್ಲೋಮಿಂದ ಪ್ರೇಮ ಜಲದ ಕಂಪುಬಂದು ಚೀರುವೆದೆಯ ಭಾವಹೇಳಲಾರೆ ತಾಳಲಾರೆಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ....ಓ..
No comments:
Post a Comment