Tuesday, July 17, 2007






ರೆಕ್ಕೆ ಇದ್ದರೆ ಸಾಕೇಹಕ್ಕಿಗೆ ಬೇಕು ಭಾನುಬಯಲಲಿ ತೇಲುತ ತಾನುಮ್ಯಾಲೆ ಹಾರೋಕೇಕಾಲೊಂದಿದ್ದರೆ ಸಾಕೇಚಿಗರಿಗೆ ಬೇಕು ಕಾನುಗಾಳಿಯ ಮೇಲೆ ತಾನುಜಿಗಿದು ಆಡೋಕೇರೆಕ್ಕೆ ಇದ್ದರೆ ಸಾಕೇಹೂವೊಂದಿದ್ದರೆ ಸಾಕೇಬ್ಯಾಡವೆ ಗಾಳಿನೀವೆ ಹೇಳಿಕಂಪ ಬೀರೋಕೇಮುಖವೊಂದಿದ್ದರೆ ಸಾಕೇದುಂಬಿಯಾ ತಾವಾಬ್ಯಾಡವೆ ಹೂವಾಜೇನ ಹೀರೋಕೇರೆಕ್ಕೆ .....ನೀರೊಂದಿದ್ದರೆ ಸಾಕೇಬ್ಯಾಡವೆ ಹಳ್ಳಾಬಲ್ಲವ ಬಲ್ಲಾತೊರೆಯು ಹರಿಯೋಕೇಮೋಡಾ ಇದ್ದರೆ ಸಾಕೇಬ್ಯಾಡವೆ ಭೂಮಿಹೇಳಿ ಸ್ವಾಮಿಮಳೆಯು ಸುರಿಯೋಕೇರೆಕ್ಕೆ .....ಕಣ್ಣೊಂದಿದ್ದರೆ ಸಾಕೇಬ್ಯಾಡವೆ ಮಂದೆಕಣ್ಣಿನ ಮುಂದೆನಿಮಗೆ ಕಾಣೋಕೇಕೊರಳೊಂದಿದ್ದರೆ ಸಾಕೇಬ್ಯಾಡವೆ ಹಾಡುಎಲ್ಲರ ಜೋಡಿಕೂಡಿ ಹಾಡೋಕೇರೆಕ್ಕೆ .....





ನೆನಪುಗಳ ಮಾತು ಮಧುರಾಮೌನಗಳ ಹಾಡು ಮಧುರಾ ನೆನಪುಗಳ ಮಾತು ಮಧುರಾಮೌನಗಳ ಹಾಡು ಮಧುರಾಕನಸೆ ಇರಲಿ ನನಸೆ ಇರಲಿಪ್ರೀತಿ ಕೊಡುವ ಕನಸೆ ಮಧುರಾನೆನಪುಗಳ ಮಾತು ಮಧುರಾಸಾವಿರ ಹೂಗಳ ಹುಡುಕಿದರೆಚಂದ ಬೆರೆ ಗಂಧ ಬೇರೆ ಸ್ಪರ್ಶ ಒಂದೇಸಾವಿರ ಹೃದಯವ ಹುಡುಕಿದರುಅಳತೆ ಬೇರೆ ಸೆಳೆತ ಬೇರೆ ಪ್ರೀತಿ ಒಂದೇತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೊ ಪ್ರೀತಿಗಾಳಿಯ ಗಂಧವ ಪಡೆದು ಅಂದವ ಹೆಣೆಯೊ ಪ್ರೀತಿಶಂಕೆ ಇರದೇ ಗುಣಿಸೊ ಪ್ರೀತಿನಿದ್ದೆ ನುಂಗಿ ಕುಣಿಸೊ ಪ್ರೀತಿಶಬ್ದವಿರಲಿ! ಶಬ್ದವಿರಲಿಪ್ರೀತಿ ಕೊಡುವ ಶಬ್ದ ಮಧುರನೆನಪುಗಳ ಮಾತು ಮಧುರಾಸಾವಿರಾ ಹಾಡನು ಹುಡುಕಿದರುತಾಳ ಬೇರೆ ಮೇಳ ಬೇರೆ ಸ್ವರಗಳೊಂದೇಸಾವಿರ ಪ್ರೇಮಿಯ ಹುಡುಕಿದರುತವಕ ಬೇರೆ ಪುಳಕ ಬೇರೆ ಪ್ರೀತಿ ಒಂದೇನದಿಗಳ ಕಲರವಗಳಲಿ ಅಲೆಗಳು ತೋಯೊ ಪ್ರೀತಿಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೊ ಪ್ರೀತಿಚಿಲುಮೆಯಂತೆ ಚಿಮ್ಮೊ ಪ್ರೀತಿಕುಲುಮೆಯೊಳಗೆ ಕಾಯ್ಸೊ ಪ್ರೀತಿಸ್ವಾರ್ಥವಿರಲಿ! ನಿಸ್ವಾರ್ಥವಿರಲಿಪ್ರೀತಿ ಕೊಡುವ ಸ್ವಾರ್ಥ ಮಧುರನೆನಪುಗಳ ಮಾತು ಮಧುರಾಮೌನಗಳ ಹಾಡು ಮಧುರಾ

ಎಲ್ಲಿ ಜಾರಿತೋ ಮನವು





ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋದೂರದೊಂದು ತೀರದಿಂದತೇಲಿ ಪಾರಿಜಾತ ಗಂಧ೨ದಾಟಿ ಬಂತು ಬೇಲಿ ಸಾಲಮೀಟಿ ಹಳೆಯ ಮಧುರ ನೋವಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಬಾನಿನಲ್ಲಿ ಒಂಟಿ ತಾರೆಸೋನೆ ಸುರಿವ ಇರುಳ ಮೋರೆ೨ಕತ್ತಲಲ್ಲಿ ಕುಳಿತು ಒಳಗೆಬಿಕ್ಕುತಿಹಳು ಯಾರೋ ನೀರೆಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಹಿಂದೆ ಯಾವ ಜನ್ಮದಲ್ಲೋಮಿಂದ ಪ್ರೇಮ ಜಲದ ಕಂಪುಬಂದು ಚೀರುವೆದೆಯ ಭಾವಹೇಳಲಾರೆ ತಾಳಲಾರೆಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ....ಓ..

Sunday, July 15, 2007




ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ || ಪಲ್ಲವಿ||

ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕನಕಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆನಗ ಇಲ್ಲದ ಭೀತಿ,

ಧಾರ್‍ಈಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ, ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

ಹಾಡು ಹಳೆಯದಾದರೇನು





ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ.....{ಪಲ್ಲವಿ}

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....{ಪಲ್ಲವಿ}

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......{ಪಲ್ಲವಿ}



ನೂರೊಂದು ನೆನಪ





ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ..
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದಾ

ಒಲವೆಂಬ ಲತೆಯು ತಂದಂತ ಹೂವು
ಮುಡಿಯೇರೆ ನಲಿವು ಮುಡಿಜಾರೆ ನೋವು
ಕೈಗೂಡಿದಾಗ ಕಂಡಂಥ ಕನಸು
ಅದೃಷ್ಟದಾಟ ತಂದಂಥ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದಾ..

ನೂರೊಂದು ನೆನಪು ಎದೆಯಾಳದಿಂದಾ
ಹಾಡಾಗಿ ಬಂತೂ ಆನಂದದಿಂದಾ

ತುಟಿಮೇಲೆ ಬಂದಂಥ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದೂ..
ಮೂರು ಗಂಟಲ್ಲಿ ಈ ಬಾಳ ನಂಟೂ
ಕೇಳಿ ಪಡೆದಾಗ ಸಂತೋಷವುಂಟು
ನಿನ್ನಾ ಹರುಷದಲಿ ನನ್ನಾ ಉಸಿರಿರಲಿ
ನಿನ್ನಾ ಹರುಷದಲಿ ನನ್ನಾ ಉಸಿರಿರಲಿ
ನಮ್ಮೆಲ್ಲ ಹಾರೈಕೆ ಈ ಹಾಡಿನಿಂದಾ..

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ..
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ ಆನಂದದಿಂದ ಆನಂದದಿಂದ..

Saturday, July 14, 2007

ದೀಪವು ನಿನ್ನದೆ ಗಾಳಿಯು ನಿನ್ನದೆ..



ದೀಪವು ನಿನ್ನದೆ ಗಾಳಿಯು ನಿನ್ನದೆಆರದಿರಲಿ ಬೆಳಕುಕಡಲೂ ನಿನ್ನದೆ, ಹಡಗೂ ನಿನ್ನದೆಮುಳುಗದಿರಲಿ ಬದುಕುದೀಪವು ನಿನ್ನದೆ ಗಾಳಿಯು ನಿನ್ನದೆಆರದಿರಲಿ ಬೆಳಕುಬೆಟ್ಟವು ನಿನ್ನದೆ, ಬಯಲೂ ನಿನ್ನದೆಹಪ್ಪಿನದಲಿ ಪ್ರೀತಿನೆಳಲೋ ಬಿಸಿಲೋ ಎಲ್ಲವೂ ನಿನ್ನವೆನೆಳಲೋ ಬಿಸಿಲೋ ಎಲ್ಲವೂ ನಿನ್ನವೆಇರಲಿ ಏಕ ರೀತಿದೀಪವು ನಿನ್ನದೆ ಗಾಳಿಯು ನಿನ್ನದೆಆರದಿರಲಿ ಬೆಳಕುಆಗೊಂದು ಸಿಡಿಲು ಈಗೊಂದು ಮುಗಿಲುನಿನಗೆ ಅಲಂಕಾರಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳುಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳುನಿನಗೆ ನಮಸ್ಕಾರಕಡಲೂ ನಿನ್ನದೆ, ಹಡಗೂ ನಿನ್ನದೆಮುಳುಗದಿರಲಿ ಬದುಕುಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆನಿನ್ನ ಪ್ರತಿಧ್ವನಿಆ ಮಹಾ ಕಾವ್ಯ, ಈ ಭಾವ ಗೀತೆನಿನ್ನ ಪದಧ್ವನಿ...ದೀಪವು ನಿನ್ನದೆ ಗಾಳಿಯು ನಿನ್ನದೆಆರದಿರಲಿ ಬೆಳಕುಕಡಲೂ ನಿನ್ನದೆ, ಹಡಗೂ ನಿನ್ನದೆಮುಳುಗದಿರಲಿ ಬದುಕು





ಒಲವಿನ ಉಡುಗೊರೆ ಕೊಡಲೇನುರಕುತದೆ ಬರೆದೆನು ಇದ ನಾನುಒಲವಿನ ಉಡುಗೊರೆ

ಕೊಡಲೇನುರಕುತದೆ ಬರೆದೆನು ಇದ ನಾನುಹೃದಯವೇ ಇದಾ ಮಿಡಿದಿದೆಬಯಕೆ ಮುನ್ನೂರು ನಿನ್ನಲ್ಲಿ

ನುಡಿದೆಪ್ರೇಮ ದೈವದ ಗುಡಿಯಂತೆಪ್ರೇಮ ಜೀವನ ಸುಧೆಯಂತೆಅಂತ್ಯ ಕಾಣದು ಅನುರಾಗಎಂದು

ನುಡಿವುದು ಹೊಸ ರಾಗಒಲವು ಸಿಹಿ ನೆನಪು ಸಿಹಿಹೃದಯಗಳ ಮಿಲನ ಸಿಹಿಪ್ರೇಮವೇ ಕವನಾ

ಮರೆಯದಿರುಒಲವಿನ ಉಡುಗೊರೆ ಕೊಡಲೇನುರಕುತದೆ ಬರೆದೆನು ಇದ ನಾನುಹೃದಯವೇ ಇದಾ

ಮಿಡಿದಿದೆಬಯಕೆ ಮುನ್ನೂರು ನಿನ್ನಲ್ಲಿ ನುಡಿದೆಒಲವಿನ ಉಡುಗೊರೆ ಕೊಡಲೇನುರಕುತದೆ ಬರೆದೆನು

ಇದ ನಾನುತಾಜಮಹಲಿನ ಚೆಲುವಲ್ಲಿಪ್ರೇಮ ಚರಿತೆಯ ನೋಡಲ್ಲಿಕಾಳಿದಾಸನ ಪ್ರತಿಕಾವ್ಯಪ್ರೇಮ

ಸಾಕ್ಷಿಯು ನಿಜದಲ್ಲಿಕವಿತೆ ಇದಾ ಬರೆದಿರುವೆಹೃದಯವನೆ ಕಳಿಸಿರುವೆಕೋಮಲಾ ಇದು ನೀ

ಎಸಯದಿರುಒಲವಿನ ಉಡುಗೊರೆ ಕೊಡಲೇನುರಕುತದೆ ಬರೆದೆನು ಇದ ನಾನುಹೃದಯವೇ ಇದಾ

ಮಿಡಿದಿದೆಬಯಕೆ ಮುನ್ನೂರು ನಿನ್ನಲ್ಲಿ ನುಡಿದೆಒಲವಿನ ಉಡುಗೊರೆ ಕೊಡಲೇನುರಕುತದೆ ಬರೆದೆನು

ಇದ ನಾನು

ಬೆಳದಿಂಗಳಾಗಿ ಬಾ..




ಬೆಳದಿಂಗಳಾಗಿ ಬಾ ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನುಆನಂದವ ನೀಡುವೆ
ಒಂದಾಗುವೆಬೆಳದಿಂಗಳಾಗಿ ಬಾಕಣ್ಣಲ್ಲಿ ತುಂಬಿ ಚೆಲುವಎದೆಯಲ್ಲಿ ತುಂಬಿ
ಒಲವಬಾಳಲ್ಲಿ ತುಂಬಿದೆ ಉಲ್ಲಾಸವನನ್ನೆದೆಯ ತಾಳ ನೀನುನನ್ನುಸಿರರಾಗ
ನೀನುನನ್ನೊಡಲ ಜೀವ ನೀ ಸಂತೋಷವೇನೀನಿಲ್ಲವಾದರೆ ಈ ಪ್ರಾಣ
ನಿಲ್ಲದೇನೀನಿಲ್ಲವಾದರೆ ಈ ಪ್ರಾಣ ನಿಲ್ಲದೇ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನುಆನಂದವ ನೀಡುವೆ
ಒಂದಾಗುವೆಬೆಳದಿಂಗಳಾಗಿ ಬಾಕಾವೇರಿ ತಾಯಿ ನನ್ನಬಾ ಎಂದು ಕೂಗಿ
ನಿನ್ನನೀಡಿದಳು ಬಾಳಿಗೆ ಬೆಳಕಾಗಲುಆ ದೇವಿ ಆಣೆ ನೀನೆಸಂಗಾತಿ ಕೇಳೆ
ಜಾಣೆನೀಡುವೆನು ಭಾಷೆಯ ಬಿಡು ಚಿಂತೆಯಈ ನಮ್ಮ ಪ್ರೇಮಕೆ ನಾ ಕೊಡಲೆ
ಕಾಣಿಕೆಈ ನಮ್ಮ ಪ್ರೇಮಕೆ ನಾ ಕೊಡಲೆ ಕಾಣಿಕೆ
ಬೆಳದಿಂಗಳಾಗಿ ಬಾ ತಂಗಾಳಿಯಾಗಿ ನಾನುಆನಂದವ ನೀಡುವೆ
ಒಂದಾಗುವೆಬೆಳದಿಂಗಳಾಗಿ ಬಾ ..

ನೂರು ಕಣ್ಣು ಸಾಲದು...



ನೂರು ಕಣ್ಣು ಸಾಲದು...ನೂರು ಕಣ್ಣು ಸಾಲವು ನಿನ್ನ ನೋಡಲುನೂರಾರು ಮಾತು ಸಾಲದು ಈ
ಅಂದ ಬಣ್ಣಿಸಲುನೂರು ಕಣ್ಣು ಸಾಲದು ನಾ ನಿನ್ನ ನೋಡಲುನೂರಾರು ಮಾತು ಸಾಲದು ಈ ಅಂದ
ಬಣ್ಣಿಸಲುನೂರು ಕಣ್ಣು ಸಾಲದು...ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋಯಾರ ಕನಸ
ಕನ್ಯೆಯೋ ಶೃಂಗಾರ ಕಾವ್ಯವೋಈ ಹೊಳೆವ ಕಣ್ಣ ನೋಟ ಮುಂಗುರುಳ ತೂಗುವಾಟ ಈ ಚೆಲುವ
ಮೈಯ ಮಾಟಬಂಗಾರದ ಸಿಂಗಾರಿ ಕಂಡು ಮೂಕನಾದೆನುನೂರು ವರುಷವಾಗಲಿ
ಮರೆಯಲಾರೆನುಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನುನೂರು ವರುಷವಾಗಲಿ...ಜನುಮ
ಜನುಮದಲ್ಲೂ ನೀನು ನನ್ನವಳೇನೇಈ ಮೊಹ ತಿಳಿಯಲಾರೆ ನೀ ನನ್ನ ಅರಿಯಲಾರೆ ನೀ ಇರದೆ
ಬಾಳಲಾರೆನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವನೂರು ವರುಷವಾಗಲಿ ಮರೆಯಲಾರೆನುಎಂದೆಂದು
ನಿನ್ನ ಅಗಲಿ ನಾ ದೂರ ಹೋಗೆನುನೂರು ವರುಷವಾಗಲಿ...ನೂರು ಕಣ್ಣು ಸಾಲದು...ನೂರು ಕಣ್ಣು
ಸಾಲವು ನಿನ್ನ ನೋಡಲುನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು.